Publish Date: Fri, 05 Feb 2021 (09:14 IST)
Updated Date: Fri, 05 Feb 2021 (09:15 IST)
ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ ಮಾನಭಂಗ ಎಸಗಿದ ಘಟನೆ ನಡೆದಿದೆ.
ಸಂತ್ರಸ್ತೆ ಹೊಲದಲ್ಲಿ ಬೆಳೆಸಿದ ತರಕಾರಿಗಳನ್ನು ತರಲು ಹೋದಾಗ ಹಳ್ಳಿಯ ಯುವಕನೊಬ್ಬ ಆಕೆಗೆ ಪ್ರಜ್ಞೆ ತಪ್ಪಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ.
ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವಕನ ಮನೆಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಆತನ ವಿರುದ್ಧ ಸಂತ್ರಸ್ತೆಯ ಕುಟುಂಬದವರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ತಂಡ ರಚಿಸಿದ್ದಾರೆ ಎನ್ನಲಾಗಿದೆ.