ಮಾಸ್ಕ್ ಧರಿಸದ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ದಂಡ ಹಾಕಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜಾರ್ಖಂಡ್ ರಾಜ್ಯ ಸರಕಾರದ ಈ ಆದೇಶಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸುದೇಶ್ ವರ್ಮಾ ಮಾತನಾಡಿದ್ದು, ಜಾರ್ಖಂಡ್ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ಕುರಿತು ಸಾಕಷ್ಟು ಜಾಗೃತಿ ಮೂಡಿಸಬೇಕಿದೆ. ಆ ಬಳಿಕ ದಂಡದ ಮೊತ್ತದ ಬಳಿಕ ನಿರ್ಧಾರ ಮಾಡಬೇಕು.
ಹಳ್ಳಿಗಳ ಜನರು ಒಂದು ಲಕ್ಷ ರೂ. ದಂಡ ಕೊಡೋದಕ್ಕೆ ಶಕ್ತರಾಗಿದ್ದಾರಾ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕಿದೆ ಎಂದು ಬಿಜೆಪಿ ತಿರುಗೇಟು ನೀಡಿದ್ದು, ಲಕ್ಷ ರೂ. ದಂಡ ಹಾಕೋದನ್ನು ಕೂಡಲೇ ಬಿಡಬೇಕು ಎಂದಿದೆ.