Publish Date: Wed, 17 Feb 2021 (09:06 IST)
Updated Date: Wed, 17 Feb 2021 (09:08 IST)
ರಾಂಚಿ: ವಾರಕ್ಕೆ ಮೂರು ದಿನ ಹೆಂಡತಿ ಜೊತೆ, ಮತ್ತೆ ಮೂರು ದಿನ ಗರ್ಲ್ ಫ್ರೆಂಡ್ ಜೊತೆ. ಮತ್ತೊಂದು ದಿನ ವಿಶ್ರಾಂತಿ! ಇದು ರಾಂಚಿಯ ವ್ಯಕ್ತಿಯೊಬ್ಬನ ರಿಯಲ್ ಲೈಫ್ ಕಹಾನಿ.
ರಾಜೇಶ್ ಮಹಾತೋ ಎಂಬಾತ ಮದುವೆ ಬಳಿಕ ಮತ್ತೊಬ್ಬ ಹುಡುಗಿಯ ಸ್ನೇಹಕ್ಕೆ ಬಿದ್ದ. ಪತ್ನಿಯನ್ನು ಬಿಟ್ಟು ಆಕೆಯ ಜೊತೆ ಮನೆ ಬಿಟ್ಟು ಹೋಗಿದ್ದ. ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಅತ್ತ ಗರ್ಲ್ ಫ್ರೆಂಡ್ ಮನೆಯವರೂ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಕೊನೆಗೆ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ಮೂರು ದಿನ ಹೆಂಡತಿ ಜೊತೆ ಮೂರು ದಿನ ಗರ್ಲ್ ಫ್ರೆಂಡ್ ಜೊತೆ ಮತ್ತೊಂದು ದಿನ ರಜೆ ಪಡೆಯುವಂತೆ ಸಲಹೆ ನೀಡಿದ್ದರು! ಆದರೆ ಕೆಲವು ದಿನಗಳ ಬಳಿಕ ಗರ್ಲ್ ಫ್ರೆಂಡ್ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಮಾಡಿ ರಾಜೇಶ್ ವಿರುದ್ಧ ದೂರು ನೀಡಿದ್ದಾಳೆ. ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಇಬ್ಬರನ್ನು ಕಟ್ಟಿಕೊಂಡ ರಾಜೇಶ್ ಪರಾರಿಯಾಗಿದ್ದಾನೆ.