Publish Date: Mon, 03 Jan 2022 (14:06 IST)
Updated Date: Mon, 03 Jan 2022 (19:08 IST)
ಹೈದರಾಬಾದ್ : ಕೊರೊನಾ ಕಾರಣದಿಂದ ಗೆಳತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.
ನ್ಯೂ ಇಯರ್ಗೆ ಗೆಳತಿ ನೋಡಲು ಹೋಗಲು ಸಾಧ್ಯವಾಗದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ವಿನೀತ್(22) ಮೃತ ಯುವಕ. ಈತ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸೋಂಕು ಹೆಚ್ಚಾಗಿರುವ ಕಾರಣ ಪ್ರಿಯತಮೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಹದಿ ಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಗರ ಕಾಲೋನಿಯ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ವಿನೀತ್ ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಒಳ್ಳೆ ಜೀವನ ನಡೆಸಲು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲಸವನ್ನು ಹುಡುಕಿಕೊಂಡು ಹೈದರಾಬಾದ್ಗೆ ಬಂದಿದ್ದ.
ಒಂದು ದಿನ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. ಮೂರು ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್ಗೆ ಬರುವುದಾಗಿ ಹೇಳಿದ್ದ ವಿನೀತ್ಗೆ ಊರಿಗೆ ಊಗಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Ramya kosira
Publish Date: Mon, 03 Jan 2022 (14:06 IST)
Updated Date: Mon, 03 Jan 2022 (19:08 IST)