ಲಕ್ನೋ: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದಕ್ಕೆ ಹಿಂದೂ ಯುವಕ ಕೊಲೆಗೀಡಾಗಿದ್ದಾನೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
22 ವರ್ಷದ ಯುವಕ ಮುಸ್ಲಿಂ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಇತ್ತೀಚೆಗೆ ಯುವತಿಯ ಅಶ್ಲೀಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಯುವಕನ ಕೆಲಸವೆಂದು ತಿಳಿದಿದ್ದ ಯುವತಿ ಮನೆಯವರು ಆತನಿಗೆ ಪಾಠ ಕಲಿಸಲು ಮುಂದಾಗಿದ್ದರು.
ಈ ಸಂಬಂಧ ಯುವತಿ ಕುಟುಂಬಸ್ಥರೇ ಯುವಕನನ್ನು ಕೊಲೆ ಮಾಡಿದ್ದು, ಈಗಾಗಲೇ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.