Publish Date: Sun, 04 Sep 2022 (08:20 IST)
Updated Date: Sun, 04 Sep 2022 (08:46 IST)
ನವದೆಹಲಿ: ರೈಲು ಪ್ರಯಾಣದ ವೇಳೆ ಸಾಕಷ್ಟು ಅಪರಾಧ ಕೃತ್ಯಗಳು ನಡೆಯುವ ಘಟನೆಗಳನ್ನು ಸಾಕಷ್ಟು ಕೇಳಿದ್ದೇವೆ. ಅಂತಹದ್ದೇ ಒಂದು ಘಟನೆ ಹರ್ಯಾಣದಲ್ಲಿ ನಡೆದಿದೆ.
ಹಿಸ್ಸಾರ್ ರೈಲ್ವೇ ಸ್ಟೇಷನ್ ವ್ಯಾಪ್ತಿಯಲ್ಲಿ ರೈಲಿನಲ್ಲಿ ಚಲಿಸುತ್ತಿದ್ದ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಮಹಿಳೆ ಪ್ರತಿರೋಧಿಸಿದಾಗ ಆಕೆಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಲಾಗಿದೆ.
ಈ ಬಗ್ಗೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನಿಬ್ಬರು ಮಕ್ಕಳೊಂದಿಗೆ ತವರಿಗೆ ಹೋಗಿ ವಾಪಸ್ ಆಗುತ್ತಿದ್ದಾಗ ಯುವಕನೊಬ್ಬ ರೈಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಪ್ರತಿರೋಧಿಸಿದಾಗ ಹಲ್ಲೆ ನಡೆಸಿ ರೈಲಿನಿಂದ ಹೊರ ನೂಕಿದ್ದಾನೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಮಕ್ಕಳ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಿಳೆಯ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.