Publish Date: Sat, 10 Oct 2020 (10:34 IST)
Updated Date: Sat, 10 Oct 2020 (10:36 IST)
ನವದೆಹಲಿ: ಮೂವರು ಮಕ್ಕಳನ್ನು ಕೊಂದು ರೈತನೊಬ್ಬ ತಾನೂ ಸ್ವಯಂ ಜೀವಕೊನೆಗಾಣಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
35 ವರ್ಷದ ವ್ಯಕ್ತಿ ಕೆಲವು ಸಮಯದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ. ಇದೇ ಬೇಸರದಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇದೇ ಕಾರಣಕ್ಕೆ ತನ್ನ 7 ವರ್ಷದ ಗಂಡು ಮಗು ಮತ್ತು 1 ಮತ್ತು 3 ವರ್ಷದ ಹೆಣ್ಣು ಮಕ್ಕಳನ್ನು ಕೊನೆಗಾಣಿಸಿ ತಾನೂ ಜೀವ ಕಳೆದುಕೊಂಡಿದ್ದಾನೆ. ಸಾಯುವ ಮೊದಲು ಡೆತ್ ನೋಟ್ ಬರೆದಿಟ್ಟು ತನ್ನ ಆಸ್ತಿಯನ್ನೆಲ್ಲಾ ಗುರುದ್ವಾರಕ್ಕೆ ದಾನ ಮಾಡಬೇಕೆಂದು ಬರೆದುಕೊಂಡಿದ್ದಾನೆ.