Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಾಟ್ನಾ: ಅತ್ಯಾಚಾರ ಮಾಡಲು ಬಂದ ದುರುಳನ ಕೃತ್ಯವನ್ನು ವಿರೋಧಿಸಿದ್ದಕ್ಕೆ ಪಾಪಿ ಮಹಿಳೆಯ ಕಣ್ಣು ಕಿತ್ತು, ಗಂಭೀರವಾಗಿ ಗಾಯಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಆರೋಪಿಯನ್ನು ಈಗ ಅರೆಸ್ಟ್ ಮಾಡಲಾಗಿದೆ. ಮಗಳ ಜೊತೆ ಮನೆಯೊಳಗಿದ್ದಾಗ ಮಹಿಳೆಯನ್ನು ಬಲವಂತವಾಗಿ ಹೊರ ಕರೆತಂದ ಆರೋಪಿ ಮೊಹಮ್ಮದ್ ಶಮೀಮ್ ಎಂಬಾತ ಹಿತ್ತಲಿಗೆ ಎಳೆದೊಯ್ದು ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಾಗ ಆಕೆಯ ಬಾಯಿಗೆ ಸೊಪ್ಪು ತುರುಕಿ ಬಾಯಿ ಮುಚ್ಚಿಸಲು ಯತ್ನಿಸಿದ್ದಾನೆ.
ಆಗಲೂ ಮಹಿಳೆ ಪ್ರತಿರೋಧಿಸಿದಾಗ ಆಕೆಯ ಕಣ್ಣಿಗೆ ಹಾನಿ ಮಾಡಿದ್ದಲ್ಲದೆ, ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ. ಆರೋಪಿ ಮಹಿಳೆಯ ನೆರೆಮನೆಯವನಾಗಿದ್ದು, ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯ ಮಗಳ ಹೇಳಿಕೆಯನ್ನಾಧರಿಸಿ ಆತನನ್ನು ಬಂಧಿಸಲಾಗಿದೆ.