Publish Date: Sat, 04 Jun 2022 (09:30 IST)
Updated Date: Sat, 04 Jun 2022 (09:41 IST)
ಆಗ್ರಾ: ಮಹಿಳೆಯನ್ನು ಕೊಂದು ಆಕೆಯ ಮೃತದೇಹವನ್ನು ಪ್ರಿಯಕರ ಮತ್ತು ತಂದೆ ಸೇರಿಕೊಂಡು ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ.
20 ವರ್ಷದ ಯುವತಿಯ ಅರೆಬೆಂದ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಇದೇ ವೇಳೆ ಯುವತಿಯ ಪೋಷಕರೂ ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ ವಿಚಾರಣೆ ನಡೆಸಿದಾಗ ಯುವತಿ ಕೊಲೆಯಾಗಿರುವುದು ತಿಳಿದುಬಂದಿದೆ. ಇದೀಗ ಕೊಲೆ ಕೃತ್ಯವೆಸಗಿದ ಪ್ರಿಯಕರ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.