Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇರುವೆ ಕಡಿತಕ್ಕೆ ಮೂರು ದಿನ ಮಗು ಆಸ್ಪತ್ರೆಯಲ್ಲೇ ಸಾವು

ಇರುವೆ ಕಡಿತಕ್ಕೆ ಮೂರು ದಿನ ಮಗು ಆಸ್ಪತ್ರೆಯಲ್ಲೇ ಸಾವು
ಲಕ್ನೋ , ಶನಿವಾರ, 4 ಜೂನ್ 2022 (09:00 IST)
ಲಕ್ನೋ: ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗುವುದು ಹಲವು ಬಾರೀ ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಅಂತಹದ್ದೇ ನಿರ್ಲ್ಯಕ್ಷಕ್ಕೆ ಉತ್ತರಪ್ರದೇಶದಲ್ಲಿ ಮೂರು ದಿನ ಮಗುವೊಂದು ಸಾವನ್ನಪ್ಪಿದೆ.

ಉತ್ತರ ಪ್ರದೇಶದ ಮಹಬೂಬಾ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನದ ಮಗುವೊಂದು ಇರುವೆ ಕಡಿತಕ್ಕೊಳಗಾಗಿ ಸಾವನ್ನಪ್ಪಿದೆ. ಇದೀಗ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು, ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

ಆಸ್ಪತ್ರೆಯ ವಾರ್ಡ್ ನಲ್ಲಿ ವಿಪರೀತ ಕೊಳೆ, ಇರುವೆಯಿತ್ತು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳಿಗೆ ಹೇಳಿದರೂ ಕ್ಯಾರೇ ಎಂದಿರಲಿಲ್ಲ. ಇದೀಗ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಇದ್ದು ಇಲ್ಲದಂತಾದ ಇ – ಶೌಚಾಲಯ