ಚಂಡೀಗಢ : ಮತಾಂತರದ ಕುರಿತು ಕಾನೂನು ರಚಿಸಬೇಕು. ಆದರೆ ಅದರ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡಬಾರದು ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಧರ್ಮವು ಪ್ರತಿಯೊಬ್ಬರ ಖಾಸಗಿ ವಿಷಯವಾಗಿದೆ. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಪೂಜಿಸುವ ಹಕ್ಕಿದೆ. ಆದರೆ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದು ತಪ್ಪು. ಅಂತಹ ಮತಾಂತರ ತಡೆಗೆ ಕಾನೂನು ರಚಿಸುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.
ಮತಾಂತರದ ಹೆಸರಲ್ಲಿ ಯಾರಿಗೂ ಕಿರುಕುಳ ನೀಡಬಾರದು. ಅವರನ್ನು ಹೆದರಿಸಿ ಮತಾಂತರ ಮಾಡುವುದು ತಪ್ಪು. ಇದರ ತಡೆಗೆ ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾನೂನು ಜಾರಿಯಲ್ಲಿದೆ ಎಂದರು.