Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂತರ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹತ್ವದ ಸೂಚನೆ ಕೊಟ್ಟಿದ್ದಾರೆ.
ಯಾವುದೇ ತರಹದ ಆಮಿಷ ಒಡ್ಡಿ ಬಲವಂತದ ಮತಾಂತರ ಕಾನೂನು ಬಾಹಿರ. ಇಂತಹುದಕ್ಕೆ ಯಾವುದೇ ತರಹದ ಅವಕಾಶ ಕೊಡಬಾರದು ಎಂದು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ' ಎಂದು ಮುಖ್ಯಮಂತ್ರಿಯವರು ಬಲವಂತದ ಮತಾಂತರ ತಡೆಗೆ ಖಡಕ್ ಸೂಚನೆ ಕೊಟ್ಟಿದ್ದಾರೆ .
ಈ ತರಹದ ಘಟನೆ ಹಲವು ಕಡೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಲವಂತದ ಮತಾಂತರ ಮಾಡುವ ವಿರೋಧವಾಗಿ ಕಾನೂನನ್ನು ಜಾರಿಗೆ ತರುವಂತಹ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.