Publish Date: Sun, 16 May 2021 (09:23 IST)
Updated Date: Sun, 16 May 2021 (09:25 IST)
ತಿರುವನಂತಪುರಂ: ಕೊರೋನಾದಿಂದಾಗಿ ನಲುಗಿದ್ದ ಕೇರಳಕ್ಕೆ ಈಗ ತೌಕ್ತೆ ಚಂಡಮಾರುತದ ಭೀತಿ ಎದುರಾಗಿದೆ. ಚಂಡಮಾರುತದ ಪರಿಣಾಮ ಕೇರಳ ಕರಾವಳಿಯ ಜನ ಭೀತಿಯಲ್ಲಿದ್ದಾರೆ.
ಕೇರಳದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕದ ತೀರ ಭಾಗದಲ್ಲೂ ಇದರ ಪ್ರಭಾವ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಕಡಲಬ್ಬರ ಹೆಚ್ಚಾಗಿದೆ.
ಕಡಲ ತಡಿಯಲ್ಲಿ ಕೆಲವು ಮನೆ, ಆಸ್ತಿ ಪಾಸ್ತಿಗಳು ನಷ್ಟವಾಗಿದೆ. ಭಾರೀ ಗಾತ್ರ ಅಲೆ ಉದ್ಭವವಾಗುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ತೀರ ಪ್ರದೇಶದ ಜನ ಬೇರೆಡೆ ವಲಸೆ ಹೋಗುವಂತಾಗಿದೆ.