Publish Date: Sun, 16 May 2021 (09:17 IST)
Updated Date: Sun, 16 May 2021 (09:18 IST)
ಬೆಂಗಳೂರು: ಮೇ 24 ಕ್ಕೆ ಅಂತ್ಯವಾಗಲಿರುವ ಲಾಕ್ ಡೌನ್ ಮತ್ತೆ ಮುಂದುವರಿಯಲಿದೆ, ಎರಡು ತಿಂಗಳು ಕರ್ನಾಟಕ ಲಾಕ್ ಆಗಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿವೆ.
ಇದು ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದೆ. ಕೊರೋನಾ ಭಯಕ್ಕಿಂತ ಇನ್ನೂ ಎರಡು ತಿಂಗಳು ಮನೆಯಲ್ಲಿ ಕೂರುವಂತಾದರೆ ಹೊಟ್ಟೆ ಪಾಡೇನು ಎಂಬ ಭೀತಿಯಲ್ಲಿ ಹಲವರು ಮಾನಸಿಕವಾಗಿ ಗೊಂದಲಕ್ಕೀಡಾಗಿದ್ದಾರೆ.
ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಲಾಕ್ ಡೌನ್ ಮಾಡುವುದಿದ್ದರೂ ಪೂರ್ಣ ಪ್ರಮಾಣದಲ್ಲಿ ಲಾಕ್ ಮಾಡುವ ಸಾಧ್ಯತೆಯಿಲ್ಲ. ಬದಲಾಗಿ ಈಗಿರುವ ಕಠಿಣ ನಿಯಮಗಳನ್ನು ಒಂದೊಂದಾಗಿ ಸಡಿಲಗೊಳಿಸಿ ಇನ್ನು ಎರಡು ತಿಂಗಳ ಅವಧಿಯಲ್ಲಿ ಕೆಲವೊಂದು ನಿರ್ಬಂಧ ವಿಧಿಸಬಹುದು. ಆದರೆ ಸಂಪೂರ್ಣ ಲಾಕ್ ಡೌನ್ ಮಾಡುವ ಸಾಧ್ಯತೆ ಕಡಿಮೆ.