Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ: ದೆಹಲಿಗೆ ತೆರಳುತ್ತಿದ್ದ ಕಫಿಯತ್ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶ ಔರಾಲಿಯಾ ಜಿಲ್ಲೆಯಲ್ಲಿ ಹಳಿ ತಪ್ಪಿದ್ದು, ಕನಿಷ್ಠ 21 ಮಂದಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.
ಅಝಾಮ್ ಗಡ್ ನಿಂದ ದೆಹಲಿಗೆ ತೆರಳುತ್ತಿದ್ದ ರೈಲು ಹಳಿ ತಪ್ಪಿದೆ. ಇದರಿಂದಾಗಿ ಕನಿಷ್ಠ 8 ಬೋಗಿಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ ಸುಮಾರು 2.50 ಕ್ಕೆ ಈ ಘಟನೆ ನಡೆದಿದೆ. ಪಾಟ್ನಾ ಮತ್ತು ಅಚ್ಚಾಲ್ಡಾ ರೈಲ್ವೇ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಳ್ಳುಗಾಡಿಯೊಂದು ರೈಲಿನ ಎಂಜಿನ್ ಗೆ ಡಿಕ್ಕಿಯಾದ್ದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ದುರಂತ ಸಂಭವಿಸಿತ್ತು. ಇದೀಗ ಒಂದೇ ವಾರದಲ್ಲಿ ಎರಡನೇ ಬಾರಿಗೆ ಹಳಿ ತಪ್ಪಿ ದುರಂತ ಸಂಭವಿಸಿದೆ.