ಬೆಳಗಾವಿ: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕಿ ಕಾವೇರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸುಮಾರು 20 ಅಡಿ ಆಳದಲ್ಲಿ ಮಗುವಿನ ಬಟ್ಟೆ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಆಟವಾಡುತ್ತಿದ್ದ ಮಗು ನಿನ್ನೆ ಕೊಳವೆ ಬಾವಿಗೆ ಬಿದ್ದಿತ್ತು. ರಾತ್ರಿಯಿಂದಲೂ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ, ಕೊಳವೆ ಬಾವಿ ಪಕ್ಕದಲ್ಲೇ ಇನ್ನೊಂದು ಬಾವಿ ಕೊರೆಯಲಾಗುತ್ತಿದೆ. ಈಗಾಗಲೇ 12 ರಿಂದ 13 ಅಡಿ ಆಳದ ಗುಂಡಿ ಕೊರೆಯಲಾಗಿದೆ.
ಮಗುವಿನ ಸ್ಥಿತಿ ಗತಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಿಲ್ಲ. ಮಗುವಿನ ತಾಯಿ ಸವಿತಾ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಜನ ಸಾಗರವೇ ಬೀಡು ಬಿಟ್ಟಿದೆ. ಮಗು ಮತ್ತಷ್ಟು ಕೆಳಕ್ಕೆ ಜಾರದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಪರಿಹಾರ ತಂಡ ತಿಳಿಸಿದೆ.
ಎನ್ ಡಿಆರ್ ಎಫ್ ಸಿಬ್ಬಂದಿ ಜತೆ, ಬೆಳಗಾವಿಯ ಸೇನಾ ನೆಲೆಯ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿದ್ದು, ಸುಮಾರು 500 ಸಿಬ್ಬಂದಿಗಳು ನಿರಂತರ ಪ್ರಯತ್ನ ನಡೆಸಿದ್ದಾರೆ. ಕೊಳವೆ ಬಾವಿಯೊಳಗೆ ಮಗುವಿನ ರಕ್ಷಣೆಗೆ ಆಕ್ಸಿಜನ್ ಕೊಳವೆ ಇಳಿಬಿಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ