Publish Date: Sun, 11 Dec 2022 (09:46 IST)
Updated Date: Sun, 11 Dec 2022 (10:10 IST)
ನವದೆಹಲಿ : ಮುಂಬೈ ಮೂಲದ ಯುವತಿ ಶ್ರದ್ಧಾವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ 14 ದಿನಗಳಿಗೆ ನ್ಯಾಯಂಗ ಬಂಧನವನ್ನು ವಿಸ್ತರಣೆ ಮಾಡಿತು. ಅಫ್ತಾಬ್ ಬುದ್ಧಿವಂತ ಯುವಕನಾಗಿದ್ದು ತನಿಖೆಯಲ್ಲಿ ಪೊಲೀಸರು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ.
ಆಗಾಗ್ಗೆ ಹೇಳಿಕೆ ಬದಲಿಸುತ್ತಾನೆ ಮತ್ತು ಹೊಸ ಮಾಹಿತಿಯನ್ನು ನೀಡುತ್ತಿದ್ದಾನೆ ಇವುಗಳ ಆಧಾರದ ಮೇಲೆ ತನಿಖೆ ನಡೆಸಬೇಕಿದೆ.
ಜೈಲಿನಲ್ಲಿ ಇಬ್ಬರು ಕೈದಿಗಳ ಜೊತೆಗೆ ಅಫ್ತಾಬ್ ಇದ್ದು ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಮಂಪರು ಪರೀಕ್ಷೆ ಮತ್ತು ಫಾಲಿಗ್ರಾಫ್ ಪರೀಕ್ಷೆ ಅಂತ್ಯವಾಗಿದ್ದು, ಅದನ್ನು ಆಧರಿಸಿ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ.