Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ : ಇತ್ತೀಚಿನ ಮದುವೆಗಳು ಮಂಟಪಕ್ಕೆ ಬಂದು ಮುರಿದು ಬೀಳುವುದು ಹೆಚ್ಚಾಗಿದೆ.
ಇಲ್ಲೊಂದು ಜೋಡಿ ಕುತ್ತಿಗೆಗೆ ಹಾರ ಹಾಕುವ ಬದಲಾಗಿ, ಎಸೆದಿದ್ದಾನೆ ಎಂದು ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.
ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿದಳು. ಈ ಘಟನೆ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ.
ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ.