Webdunia - Bharat's app for daily news and videos

Install App

ಕಾಂಗ್ರೆಸ್ ಇಲ್ಲದೇ ಇಂಡಿಯಾ ಕೂಟದ ಗೆಲುವಿನ ಸವಾರಿ ಸಾಧ್ಯನಾ..?

Webdunia
ಮಂಗಳವಾರ, 12 ಡಿಸೆಂಬರ್ 2023 (19:45 IST)
ಮೋದಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಬೇಕಾದರೆ ಇಂಡಿಯಾ ಒಕ್ಕೂಟದಲ್ಲಿ ಒಡಕುಧ್ವನಿಗಳ ಆಟಾಟೋಪ ಮೊದಲು ನಿಲ್ಲಬೇಕು. ಸದ್ಯ ಈಗ ಬರೀ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದ್ದನ್ನೆ ಎತ್ತೆತ್ತಿ ತೋರಿಸುವ ಇಂಡಿಯಾ ಕೂಟದ ಒಂದಷ್ಟು ಮಿತ್ರಪಕ್ಷಗಳ ನಡೆಯಿಂದ, ಎನ್‌ಡಿಎ ಮೈತ್ರಿಕೂಟಕ್ಕೆ ಇನ್ನಷ್ಟು ಹುಮ್ಮಸ್ಸು ಬರೋದ್ರಲ್ಲಿ ಡೌಟೇ ಇಲ್ಲ.....!
 
ಸೋಲು ಯಾವತ್ತು ಕಂಗೆಡಿಸಬಾರದು, ಸೋತಾಗ ಮೈ ಕೆಡವಿ ಎದ್ದು ನಿಲ್ಲಬೇಕು. ಅದು ಬಿಟ್ಟು ಬರೀ ಸೋಲಿನ ಜಪ ಮಾಡುತ್ತಾ, ಇಡೀ ಪಕ್ಷದ ಆತ್ಮವಿಶ್ವಾಸವನ್ನು ಕುಗ್ಗಿಸುವ ಜಾಯಮಾನಕ್ಕೆ ಹೋಗಿ ನಿಂತ ಇಂಡಿಯಾ ಕೂಟದ ಒಂದಷ್ಟು ಪಾರ್ಟಿಗಳ ಅತಂತ್ರ ಹೇಳಿಕೆಗಳು ಅದೆಷ್ಟು ಸಮಂಜಸವೋ ನೀವೆ ಹೇಳಿ.?
 
ಒಂದAತೂ ಸ್ಪಷ್ಟ.... ಕಾಂಗ್ರೆಸ್ ಇಲ್ಲದೇ ಮೋದಿ ನೇತೃತ್ವದ ಎನ್‌ಡಿಯ ಕೂಟವನ್ನು ಸೋಲಿಸೋದು ದೂರದ ಮಾತು. ಕಾಂಗ್ರೆಸ್‌ನ ಮುಂದಾಳತ್ವದಲ್ಲೆ ಇಂಡಿಯಾ ಕೂಟದ ಎಲ್ಲಾ ಮಿತ್ರಪಕ್ಷಗಳು ಒಗ್ಗಟ್ಟಿನ ಒಮ್ಮತದ ನಿರ್ಣಯವನ್ನು ತೆಗೆದುಕೊಂಡು ಬಿಟ್ಟರೆ, ಮೋದಿಗೆ ಪೈಪೋಟಿ ಒಡ್ಡಬಹುದು..? ಅದೃಷ್ಟ ಚೆನ್ನಾಗಿದ್ದರೆ, ಇಂಡಿಯಾ ಕೂಟಕ್ಕೆ ಅಧಿಕಾರ ಸಿಗಬಹುದು.?
 
ಬೈ ಚಾನ್ಸ್... ಕಾಂಗ್ರೆಸ್ ಸೋತಿದೆ ಅನ್ನೊ ಒಂದೇ ಕಾರಣಕ್ಕೆ ಇಂಡಿಯಾ ಕೂಟದಲ್ಲಿ ಯದ್ವಾತದ್ವಾ ಧೋರಣೆ ಮನಸ್ಥಿತಿಗಳು ಅನಾವರಣವಾದರೆ ಮತ್ತೊಮ್ಮೆ ೨೦೨೪ಕ್ಕೂ ಮೋದಿಯೇ ಹ್ಯಾಟ್ರಿಕ್ ಸರದಾರ...? ಫೈನಲೀ ಮೋದಿಯನ್ನು ಸೋಲಿಸುವ ಇಂಡಿಯಾ ಒಕ್ಕೂಟದ ಸಂಕಲ್ಪ ಛಿದ್ರ....... ಬಿಜೆಪಿ ಸುಭದ್ರ..?

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments