ಆರ್ಟಿಕಲ್ 370 ರದ್ದು ಕುರಿತ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ನಮ್ಮ ಎಡವಟ್ಟಿನಿಂದಾಗಿ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಇತ್ತು. ಇದು ಸಂವಿಧಾನಕ್ಕೆ ದೊರೆತ ಗೆಲುವು. 370 ವಿಧಿ ವಿಶೇಷ ಸ್ಥಾನಮಾನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು.
ಏಕ್ ಸಂವಿಧಾನ್, ಏಕ್ ಅನುಸಂಧಾನ್, ಏಕ್ ಕಾನೂನ್ ಹೆಸರಲ್ಲಿ ಹೋರಾಟ ನಡೆಸಲಾಗಿತ್ತು. ನಮ್ಮ ನಾಯಕ ಕಾಶ್ಮೀರದಲ್ಲಿ ಆಹುತಿಯಾದ್ರು. ಈ ಹೋರಾಟದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 360ನೇ ವಿಧಿ ರದ್ದು ಮಾಡುವ ಕ್ರಮ ತೆಗೆದುಕೊಳ್ತು. ಪಾರ್ಲಿಮೆಂಟ್‌ನಲ್ಲಿ ಹೋರಾಟ ಮಾಡಿದ್ವಿ. ಇದು ಸುಪ್ರೀಂ ಕೋರ್ಟ್ಗೆ ಹೋಗಿತ್ತು. ಸುಪ್ರೀಂ ಕೋರ್ಟ್ ಕೇಂದ್ರದ ತೀರ್ಮಾನ ಎತ್ತಿ ಹಿಡಿದಿದೆ. ಇದು ಐತಿಹಾಸಿಕ ತೀರ್ಪು. ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಇದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರ್ಣಯಕ್ಕೆ ಸಿಕ್ಕ ಜಯ. 2024ರ ಒಳಗೆ ಚುನಾವಣೆ ನಡೆಯಬೇಕು ಅಂತ ಹೇಳಿದೆ.
ಕೇಂದ್ರ ಚುನಾವಣೆ ನಡೆಸಲಿದೆ. ಮಿಲಿಟರಿಗೆ ಕಲ್ಲು ಹೊಡೆಯೋದು ನಿಂತಿದೆ. ಈಗ ಟೂರಿಸಂ ರಸ್ತೆಯಾಗಿದೆ. ಚುನಾವಣೆಯನ್ನ ನಡೆಸಲಿದೆ.ಈ ದೇಶದ ಒಬ್ಬೊಬ್ಬ ನಾಗರೀಕನಿಗೂ ಸಂತೋಷ ಕೊಡುವ ನಿರ್ಧಾರ ಇದು ಎಂದು ಹೇಳಿದ್ದಾರೆ.