ಗಡಿ ಪ್ರದೇಶದಲ್ಲಿ ಪದೇ ಪದೇ ಯುದ್ಧದ ಸನ್ನಿವೇಶ ನಿರ್ಮಾಣ ಮಾಡಿ ಉಪಟಳ ನೀಡುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತೀಯ ಸೇನೆ ಸಜ್ಜಾಗಿದೆ.
ಚೀನಾ ಮಾಡುವ ಗಡಿ ಭಾಗದಲ್ಲಿನ ತಂಟೆಗೆ ತಕ್ಕ ಉತ್ತರ ಕೊಡಲು ಭಾರತೀಯ ಸೇನಾ ಪಡೆಗಳಿಗೆ ಎಲ್ಲ ರೀತಿಯಲ್ಲಿಯೂ ಸ್ವಾತಂತ್ರ್ಯ ನೀಡಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾ ಸೇನಾ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಎಸ್.ಕೆ.ಭದೌರಿಯಾ, ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಹಾಜರಿದ್ದು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಚೀನಾ ಮಾಡುವ ಯಾವುದೇ ತರಹದ ಗಡಿಯಲ್ಲಿಯೇ ಸೂಕ್ತ ಉತ್ತರ ಕೊಡುವುದಕ್ಕೆ ಸಿದ್ಧರಾಗಿರುವುದಂತೆ ಸೂಚಿಸಿರುವ ಜೊತೆಗೆ ಅದಕ್ಕೆ ಬೇಕಾದ ಅಧಿಕಾರ, ಸ್ವಾತಂತ್ರ್ಯವನ್ನು ಕೊಡಲಾಗಿದೆ ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.