Publish Date: Sun, 21 Jun 2020 (20:45 IST)
Updated Date: Sun, 21 Jun 2020 (20:48 IST)
ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ 15 ವರ್ಷದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಗೆ (ಪಿ-8644) ಕೋವಿಡ್ ದೃಢಪಟ್ಟಿದೆ. ತಂದೆ, ತಾಯಿಯೊಂದಿಗೆ ವಾಸವಾಗಿದ್ದ ಆಕೆಗೆ 46 ವರ್ಷದ ಪಿ-6832 ಸಂಪರ್ಕದಿಂದ ಸೋಂಕು ತಗುಲಿದೆ. ಆಕೆಯನ್ನು ಹಾವೇರಿ ಜಿಲ್ಲಾ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಗ್ಗಾವಿ ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿ, ಪಟ್ಟಣದ ಸೀಲ್ಡೌನ್ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ, ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಗಂಟಲು ದ್ರವ, ರಕ್ತ ತಪಾಸಣೆ ಮಾಡುವಾಗ ವಿದ್ಯಾರ್ಥಿನಿಯ ಗಂಡಲು ದ್ರವ ಸಂಗ್ರಹಿಸಿದ್ದರು.
ತಂದೆ, ತಾಯಿ ಹಾಗೂ ಸಹೋದರರಿಗೂ ಸೋಂಕು ಕಾಣಿಸಿಕೊಂಡಿದ್ದು, ಅದು ಎದುರಿನ ಮನೆಯಲ್ಲಿನ ಸೋಂಕು ಇರುವ ವ್ಯಕ್ತಿಯಿಂದ ಹರಡಿದೆ. ಈ ಬಾರಿ ಆಕೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಮುಂಬರುವ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗವುದು ಎಂದಿದ್ದಾರೆ.