Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಡ್ ಇನ್ ಚೈನಾಗೆ ಭಾರತ ಶಾಕ್!

ಮೇಡ್ ಇನ್ ಚೈನಾಗೆ ಭಾರತ ಶಾಕ್!
ಚೈನಾ , ಶನಿವಾರ, 19 ಆಗಸ್ಟ್ 2023 (11:23 IST)
ಗಲ್ವಾನ್ ಘರ್ಷಣೆಯ ಬಳಿಕ ಚೀನಿ ಆಪ್ಗಳನ್ನು ನಿಷೇಧಿಸಿದ್ದ ಭಾರತ ಈಗ ಚೀನಾದ ಲ್ಯಾಪ್ಟಾಪ್/ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದೆ. 2020-21 ರಲ್ಲಿ ಗಲ್ವಾನ್ನಲ್ಲಿ ಘರ್ಷಣೆ ನಡೆದ ಬಳಿಕ ಚೀನಿ ಸಾಫ್ಟ್ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದ್ದ ಭಾರತ ಈಗ ಹಾರ್ಡ್ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದೆ.

ಹೀಗಾಗಿ ಭಾರತ ಈಗ ದಿಢೀರ್ ಲ್ಯಾಪ್ಟಾಪ್, ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದ್ದು ಯಾಕೆ? ಚೀನಾ ಚಿಪ್ ಫ್ಯಾಕ್ಟರಿಯಾಗಿದ್ದು ಹೇಗೆ? ಹಾರ್ಡ್ವೇರ್ ಕ್ಷೇತ್ರದಲ್ಲಿ ಚೀನಾವನ್ನು ಸೋಲಿಸಲು ಸಾಧ್ಯವೇ? ಇತ್ಯಾದಿ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂಬುದನ್ನು ಅರಿತ ಚೀನಾ ಮೂಲಸೌಕರ್ಯಕ್ಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿತು. 1980-2000 ಅವಧಿಯಲ್ಲಿ ರಸ್ತೆ, ರೈಲು, ಬಂದರು ಅಭಿವೃದ್ಧಿ ಮಾಡಲು ಮುಂದಾಯಿತು. ಮೂಲಸೌಕರ್ಯ ಅಭಿವೃದ್ಧಿಯಾದಂತೆ ವಸ್ತುಗಳು ಎಲ್ಲೇ ತಯಾರಾದರೂ ಅದು ಸುಲಭವಾಗಿ ರೈಲು ಮತ್ತು ಬಂದರು ತಲುಪುವಂತೆ ವ್ಯವಸ್ಥೆ ಮಾಡಿತು. ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗುತ್ತಿದ್ದಂತೆ ವಿದೇಶಿ ಕಂಪನಿಗಳನ್ನು ಹೂಡಿಕೆ ಮಾಡಲು ಆಹ್ವಾನಿಸಿತು.

ಜನಸಂಖ್ಯೆಯಲ್ಲಿ ದೊಡ್ಡ ದೇಶವಾಗಿರುವ ಭಾರತ ವಿಶ್ವದ ದೊಡ್ಡ ಮಾರುಕಟ್ಟೆಯೂ ಹೌದು. ಈ ಕಾರಣಕ್ಕೆ ಈಗ ಆಮದು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆ ಹೆಚ್ಚಳ ಮಾಡಲು ಚೀನಾದ ವಸ್ತುಗಳಿಗೆ ನಿರ್ಬಂಧ ಹೇರಿದೆ. ಇದರ ಜೊತೆ ಇನ್ನೊಂದು ಕಾರಣವೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನೊಂದಿಗೆ ಸೆಕ್ಸ್‌ಗೆ ನಿರಾಕರಿಸಿದ ಲಿವ್ ಇನ್ ಗೆಳತಿ ಮೇಲೆ ಮಾರಣಾಂತಿಕ ಹಲ್ಲೆ !