ಹೈದರಾಬಾದ್ : ರಿಯಾದ್ನಿಂದ ಹೈದರಾಬಾದ್ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಿ ಸುಮಾರು 67 ಲಕ್ಷ ರೂ. ಮೌಲ್ಯದ 14 ಚಿನ್ನದ ಬಾರ್ಗಳನ್ನು ವಶಪಡಿಸಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಿಯಾದ್ನಿಂದ ಬಹ್ರೇನ್ ಮೂಲಕ ಹೈದರಾಬಾದ್ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಹೈದರಬಾದ್ ಕಸ್ಟಮ್ಸ್ ಮತ್ತು ಆರ್ಜಿಐನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ತಂಡವು ವಿಮಾನದಲ್ಲಿ ಬಂದಿಳಿದ ಆರೋಪಿಯನ್ನು ಬಂಧಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ತಡೆದು ಅವರ ಬ್ಯಾಗ್ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆರೋಪಿ ತಂದಿದ್ದ ಲೈಟ್ನ ಬ್ಯಾಟರಿಯೊಳಗೆ 24 ಕ್ಯಾರೆಟ್ನ 14 ಚಿನ್ನದ ಬಾರ್ಗಳು ಪತ್ತೆಯಾಗಿದೆ. ಚಿನ್ನದ ಬಾರ್ಗಳನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬಾರ್ಗಳು ಸುಮಾರು 1287.6 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ 67,96,133 ರೂ.ಗಳಾಗಿವೆ.