Publish Date: Mon, 10 Apr 2023 (08:25 IST)
Updated Date: Mon, 10 Apr 2023 (09:28 IST)
ಗುವಾಹಟಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದಾನಿ ಸಮೂಹಕ್ಕೂ ತಮಗೂ ಸಂಬಂಧ ಇದೆ ಎಂಬ ಅರ್ಥ ಬರುವಂತೆ ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮಾನಹಾನಿಕರವಾಗಿದ್ದು ರಾಹುಲ್ ವಿರುದ್ಧ ಗುವಾಹಟಿಯಲ್ಲೇ ಕೇಸ್ ದಾಖಲಿಸುವುದಾಗಿ ಸಿಎಂ ತಿಳಿಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆಲವು ನಾಯಕರನ್ನು ಗುರಿಯಾಗಿಸಿ, ರಾಹುಲ್ ಗಾಂಧಿ ಅವರು ಶನಿವಾರ ಟ್ವೀಟ್ ಮಾಡಿದ್ದರು. ಇಂಗ್ಲಿಷ್ನಲ್ಲಿ ಅದಾನಿ ಹೆಸರನ್ನು ದೊಡ್ಡದಾಗಿ ಬರೆದು, ಕಾಂಗ್ರೆಸ್ ತೊರೆದ ನಾಯಕರ ಹೆಸರುಗಳನ್ನು ಅದಾನಿಯ ಇಂಗ್ಲಿಷ್ ಹೆಸರಿಗೆ ಹೊಂದುವಂತೆ ಜೋಡಿಸಿ ಟ್ವೀಟ್ ಮಾಡಿದ್ದರು.
ಗುಲಾಂ ನಬಿ ಆಜಾದ್, ಜೋತಿರಾಧಿತ್ಯ ಸಿಂಧಿಯಾ, ಹಿಮಂತ ಬಿಸ್ವಾ ಶರ್ಮಾ, ಕಿರಣ್ ಕುಮಾರ್ ರೆಡ್ಡಿ ಹಾಗೂ ಅನಿಲ್ ಕೆ. ಆ್ಯಂಟನಿ ಅವರ ಹೆಸರುಗಳನ್ನು ರಾಹುಲ್ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.