Publish Date: Fri, 19 Feb 2021 (09:20 IST)
Updated Date: Fri, 19 Feb 2021 (09:22 IST)
ಟರ್ಕಿ : ವಿಮಾ ಹಣಕ್ಕಾಗಿ 40 ವರ್ಷದ ವ್ಯಕ್ತಿಯೊಬ್ಬ 32 ವರ್ಷದ ಗರ್ಭಿಣಿಯಾಗಿದ್ದ ಹೆಂಡತಿಯನ್ನು ಬೆಟ್ಟದ ಮೇಲಿಂದ ತಳ್ಳಿ ಕೊಲೆ ಮಾಡಿದ ಘಟನೆ ಟರ್ಕಿಯ ಬಟರ್ ಫ್ಲೈ ಕಣಿವೆಯಲ್ಲಿ ನಡೆದಿದೆ.
ರಜಾದಿನ ಕಳೆಯಲು ಗರ್ಭಿಣಿ ಪತ್ನಿಯನ್ನು ಕಣಿವೆಯೊಂದಕ್ಕೆ ಕರೆದುಕೊಂಡು ಹೋಗಿ ಸೆಲ್ಫಿ ತೆಗೆಯುವಾಗ ಆಕೆ ಬೆಟ್ಟದಿಂದ ಕಣಿವೆಗೆ ಬಂಡೆಗಳ ಮಧ್ಯೆ ಬಿದ್ದು ಸಾವನಪ್ಪಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಆರೋಪಿ ವಿಮಾ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆದರೆ ಆರೋಪಿ ಈ ಅಪವಾದವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.