Publish Date: Mon, 28 Dec 2020 (08:11 IST)
Updated Date: Mon, 28 Dec 2020 (08:12 IST)
ಅಹಮದಾಬಾದ್ : ಕಾನ್ಸ್ ಸ್ಟೇಬಲ್ ತನ್ನ ಪತ್ನಿಗೆ ಆ್ಯಸಿಡ್ ಕುಡಿಯಲು ಒತ್ತಾಯಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಮದುವೆಯಾದಾಗಿನಿಂದ ಹೆಂಡತಿಗೆ ಕಿರುಕುಳ, ನಿಂದನೆ ಮಾಡುತ್ತಾ ಬಂದ ಕಾನ್ಸ್ ಸ್ಟೆಬಲ್ ಗೆ ವರದಕ್ಷಿಣೆಯ ರೂಪದಲ್ಲಿ ಬೈಕ್ ನೀಡಲಾಗಿತ್ತು. ಆದರೆ ಬೈಕ್ ಹಾಳಾದ ಕಾರಣ ಪತ್ನಿಗೆ ಆಗಾಗ ನಿಂದನೆ, ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಆ ವೇಳೆ ಆ್ಯಸಿಡ್ ಕುಡಿಯುವಂತೆ ಒತ್ತಾಯಿಸಿದ್ದಾನೆ.
ಬಳಿಕ ಆಕೆ ಒದ್ದಾಡುತ್ತಾ ವೈದ್ಯರ ಬಳಿ ಕರೆದೊಯ್ಯಲು ಹೇಳಿದ್ದಕ್ಕೆ ಚೆನ್ನಾಗಿ ಥಳಿಸಿದ್ದಾನೆ, ಬಳಿಕ ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪತ್ನಿ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.