ಮಧುಗಿರಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದೇ ತಪ್ಪು. ಅಂತಹದ್ದರಲ್ಲಿ ಈ ನೀಚ ಆಕೆಯನ್ನು ಹತ್ಯೆ ಮಾಡಿ ಮನೆಯಲ್ಲೇ ಹೂತು ಹಾಕಿ ಕ್ರೂರತನ ಮೆರೆದಿದ್ದಾನೆ.
ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಗಾಯತ್ರಿ ಮೃತಪಟ್ಟವಳು. ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಮದುವೆಯಾಗಿದ್ದ. ಬಾಲಕಿಯ ಮನೆಯವರು ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಮೃತದೇಹವನ್ನು ಮನೆಯ ಮಧ‍್ಯಭಾಗದಲ್ಲೇ ಹೂತು ಹಾಕಿ ಕಲ್ಲಿನಿಂದ ಮುಚ್ಚಿರುವುದು ತಿಳಿದುಬಂದಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.