ಲವ್ ಕಹಾನಿಯೊಂದರಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ.
ಮಗನೊಬ್ಬ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದನು. ಲವ್ ಮಾಡಿದ್ದ ಹುಡುಗಿಯನ್ನು ವಿರೋಧದ ನಡುವೆಯೇ ಮದುವೆಯಾಗಿದ್ದಾನೆ.
ಆದರೆ ಮಗ ಮದುವೆಯಾಗಿರುವುದಕ್ಕೆ ಆತನ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಉತ್ತರ ಪ್ರದೇಶದ ಬುಲಂದರಶಹರ್ ನಲ್ಲಿ ಈ ಘಟನೆ ನಡೆದಿದ್ದು, ಅಂತರ್ಜಾತಿ ವಿವಾಹದಿಂದಾಗಿ ಯುವತಿ ಕಡೆಯವರು ಈ ಕೊಲೆ ಮಾಡಿಸಿದ್ದಾರೆ ಎಂದು ಯುವಕನ ಮನೆ ಮಂದಿ ಆರೋಪಿಸಿದ್ದಾರೆ.
ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.