ಅಬುಧಾಬಿ : ನಮ್ಮದು ವಿಶ್ವದ ಮೊತ್ತಮೊದಲ ಎಐ ವಿಶ್ವವಿದ್ಯಾಲಯ ಎಂದು ಹೇಳಿಕೊಂಡಿರುವ ಮೊಹಮ್ಮದ್ ಬಿನ್ ಝೈದ್ ವಿವಿಯು , ತಾವು ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಕ್ಕೆ ಶೀಘ್ರದಲ್ಲೇ ಪೇಟೆಂಟ್ ಪಡೆಯುವುದಾಗಿ ಹೇಳಿದೆ. ಈ ತಂತ್ರಜ್ಞಾನವು ಗಾಯಗೊಂಡಿರುವ ವ್ಯಕ್ತಿಯು ಪೆನ್ ಮತ್ತು ಕಾಗದದ ಸಹಾಯವಿಲ್ಲದೇ ತನ್ನದೇ ಕೈಬರಹದಲ್ಲಿ ಬರೆಯಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ವಿವಿ ಹೇಳಿಕೊಂಡಿದೆ.
ಯಾವುದೇ ವ್ಯಕ್ತಿ ಕೈಬರಹವನ್ನು ಸಹ ನಕಲು ಮಾಡಬಲ್ಲ ತಂತ್ರಜ್ಞಾನವನ್ನು ಸಿದ್ದಪಡಿಸಿರುವುದಾಗಿ ಅಬುದಾಬಿಯ ಮೊಹಮ್ಮದ್ ಬಿನ್ ಝೈದ್ ಕೃತಕ ಬುದ್ದಿಮತ್ತೆ ವಿಶ್ವವಿದ್ಯಾಲಯ ಘೋಷಿಸಿದೆ. ಯಾ ವುದೇ ವ್ಯಕ್ತಿಯ ಕೈಬರಹದ ಕೆಲವು ಸಾಲುಗಳನ್ನು ನೋಡಿ ಈ ತಂತ್ರಜ್ಞಾನ ಆತನ ಸಂಪೂರ್ಣ ಕೈಬರಹವನ್ನು ನಕಲಿಸುವ ಸಾಮರ್ಥ್ಯ ಹೊಂದಿದೆ. ಇದುವರೆಗೂ ಡೀಪ್ ಫೇಕ್ ತಂತ್ರಜ್ಞಾನವನ್ನು ಕೇವಲ ಮುಖಚಹರೆ ನಕಲಿಸಲು ಹಾಗೂ ದ್ವನಿಯನ್ನು ನಕಲಿಸಲು ಬಳಸಲಾಗುತ್ತಿತ್ತು.