ಪುಣೆ ಮಹಾನಗರದ ಬುಧವಾರಪೇಟೆಯಲ್ಲಿ ಕನಿಷ್ಠ 5000 ವೇಶ್ಯೆಯರು ವೇಶ್ಯಾವಾಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಪೊಲೀಸರ ದಾಳಿ, ರೌಡಿಗಳ ಕಿರುಕುಳದಿಂದ ಬೇಸತ್ತು ಇದೀಗ ಇತರೆಡೆ ವಾಸಸ್ತಾನ ಬದಲಿಸಿ ಫೇಸ್‌ಬುಕ್ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಬುಧವಾರಪೇಟೆ ಎನ್ನುವ ಪೇಜ್ ಸೃಷ್ಟಿಸಿದ್ದು, ಪೇಜ್‌ನಲ್ಲಿ ಕಾಲ್‌ಗರ್ಲ್‌ಗಳ ಚಿತ್ರ ಮತ್ತು ದರವನ್ನು ಕೂಡಾ ನಮೂದಿಸಲಾಗಿದೆ
ಭಾರತದ ಅತಿ ಪುರಾತನ ವೃತ್ತಿಯಾದ ವೇಶ್ಯಾವಾಟಿಕೆ ಇದೀಗ ವೇಶ್ಯೆಯರ ಫೇಸ್‌ಬಳಕೆಯಿಂದ ಹೈಟೆಕ್‌ನತ್ತ ಸಾಗಿದೆ. ಪ್ರಸ್ತುತ ಫೇಸ್‌ಬುಕ್ ಬೃಹತ್ ಸಾಮಾಜಿಕ ಅಂತರ್ಜಾಲ ತಾಣವಾಗಿದೆ. ವೇಶ್ಯೆಯರು ಗ್ರಾಹಕರೊಂದಿಗೆ ಸಂಪರ್ಕಿಸಲು ಫೇಸ್‌ಬುಕ್ ಬಳಸುತ್ತಿರುವುದು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಸಾಂಸ್ಕ್ರತಿಕ ರಾಜಧಾನಿಯಾದ ಪುಣೆ ಮಹಾನಗರದಲ್ಲಿ ಬುಧವಾರಪೇಟೆ ವೇಶ್ಯಾವಾಟಿಕೆಯ ಪ್ರಮುಖ ಕೇಂದ್ರವಾಗಿದೆ. ಇತರ ಎಲೆಕ್ಟ್ರಾನಿಕ್ ಮಳಿಗೆಗಳು ಸೇರಿದಂತೆ ವಾಣಿಜ್ಯ ವಹಿವಾಟು ಭರದಿಂದ ಸಾಗುವ ಕೇಂದ್ರಸ್ಥಾನವಾಗಿದೆ. ಇದೀಗ ವೇಶ್ಯೆಯರು ಕೂಡಾ ಅತ್ಯಾಧುನಿಕ ಸೋಶಿಯಲ್ ಮೀಡಿಯಾ ಜನಪ್ರಿಯತೆಗೆ ಮಾರುಹೋಗಿದ್ದು ಯಾವುದೇ ತೊಂದರೆಯಲ್ಲಿದೆ ತಮ್ಮ ವ್ಯವಹಾರವನ್ನು ನಡೆಸುತ್ತಿದ್ದಾರೆ.