Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ಪರಿಹರಿಸಲು ಹೊಸ ಅಸ್ತ್ರಂ ತಂತ್ರಜ್ಞಾನ

 traffic

geetha

bangalore , ಶನಿವಾರ, 13 ಜನವರಿ 2024 (17:00 IST)
ಬೆಂಗಳೂರು  :ವಾಹನ ದಟ್ಟಣೆಯ ಬಗ್ಗೆ ನಿಖರವಾದ ಮಾಹಿತಿ ನೈಜ ಸಮಯದಲ್ಲಿ ದೊರೆಯಲಿದ್ದು, ಜೊತೆಗೆ ಅಪಘಾತ, ಮೆರವಣಿಗೆ ಅಥವಾ ಸಮಾರಂಭಗಳಿಂದ ಉಂಟಾಗಿರುವ ವಾಹನ ದಟ್ಟಣೆಯ ಬಗ್ಗೆಯೂ ಮಾಹಿತಿ ದೊರೆಯಲಿದೆ. ಯಾವ ಸಮಯದಲ್ಲಿ ಯಾವ ಪ್ರದೇಶದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತಿದೆ ಎಂಬ ಬಗ್ಗೆ ಆಯಾ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿಗೆ ಪ್ರತಿ 15 ನಿಮಿಷಕ್ಕೊಮ್ಮೆ ಮೊಬೈಲ್‌ ಗೆ ಸಂದೇಶ ಬರಲಿದೆ. ಜೊತೆಗೆ,  ವಾಹನ ದಟ್ಟಣೆಯ ತೀವ್ರತೆ, ವಾಹನಗಳ ಸಂಖ್ಯೆಯ ಬಗ್ಗೆಯೂ ಮಾಹಿತಿ ದೊರಕಲಿದೆ. 

ಆಂಬುಲೆನ್ಸ್‌ ಗಳ ಸುಗಮ ಸಂಚಾರಕ್ಕೂ ಸಹ ಅಸ್ತ್ರಂ ತಂತ್ರಜ್ಞಾನ ಸಹಾಯ ಮಾಡಲಿದ್ದು, ಒಂದು ವೇಳೆ ಆಂಬುಲೆನ್ಸ್‌ ಯಾವುದಾದರೂ ಟ್ರಾಫಿಕ್‌ ನಲ್ಲಿ 2 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಲ್ಲಿ ಆಪ್‌ ಮೂಲಕ ಎಸ್‌ಒಎಸ್‌ ಬಟನ್‌ ಆಕ್ಟಿವೇಟ್‌ ಆಗಲಿದೆ. ಇದರಿಂದ ಆ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಸಂಚಾರ ನಿರ್ವಹಣೆಗಾಗಿ 10 ಡ್ರೋಣ್‌ ಕೆಮೆರಾಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ಪೀಕ್‌ ಅವರ್‌ ಸಮಯದಲ್ಲಿ ಸಂಚಾರದ ದಟ್ಟಣೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. 

ರಾಜಧಾನಿ ನಗರವಾದ ಬೆಂಗಳೂರಿನ ಪ್ರಮುಖ ಸಮಸ್ಯೆಯಾದ ವಾಹನ ದಟ್ಟಣೆಯನ್ನು  ಪರಿಹರಿಸಲು ಬೆಂಗಳೂರು ಸಂಚಾರಿ ಪೊಲೀಸರು ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ.  ಅಸ್ತ್ರಂ ಎಂಬ ತಂತ್ರಜ್ಞಾನವನ್ನು ಅವಿಷ್ಕರಿಸಲಾಗಿದ್ದು, ಇದರಿಂದ ಸುಗಮ ವಾಹನ ಸಂಚಾರ ಉಂಟಾಗಲಿದೆ ಎಂದು ಸಂಚಾರ ಪೊಲೀಸ್‌ ಇಲಾಖೆ ಹೇಳಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ ಪಾತ್ ವ್ಯಾಪಾರಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ-ಡಿಸಿಎಂ ಡಿ.ಕೆ.ಶಿವಕುಮಾರ್