2002 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿ ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ಮೇಲೆ 30 ಲಕ್ಷ ರೂ. ದಂಡ ವಿಧಿಸಿದೆ.
ಪ್ರತಿ ಅತ್ಯಾಚಾರ ಪ್ರಕರಣಕ್ಕೆ ಡೇರಾ ಮುಖ್ಯಸ್ಥ 15-15 ಲಕ್ಷ ರೂ. ದಂಡವನ್ನು ವಿಧಿಸಿದೆ. ಅದರಲ್ಲಿ ಇಬ್ಬರು ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಪರಿಹಾರವಾಗಿ ತಲಾ 14 ಲಕ್ಷ ರೂ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ನ್ಯಾಯಾಲಯದ ತೀರ್ಪಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬಾ ರಾಮ್ ರಹೀಮ್ ಸಿಂಗ್ ಪರ ವಕೀಲರು, ಎರಡೂ ಪ್ರಕರಣಗಳು ಸೇರಿದಂತೆ 10 ವರ್ಷ ಜೈಲು ಶಿಕ್ಷೆ ಮತ್ತು 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅತ್ಯಾಚಾರಕ್ಕೊಳಗಾಗಿರುವ ಇಬ್ಬರು ಮಹಿಳೆಯರಿಗೆ ತಲಾ 14 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಅಪರಾಧಿ ಬಾಬಾ ರಾಮ್ ರಹೀಮ್‌ಗೆ ಎರಡು ಪ್ರಕರಣದಲ್ಲಿ 10-10 ವರ್ಷಗಳಂತೆ 20 ವರ್ಷಗಳ ಶಿಕ್ಷೆಯಾಗಿದೆ. ಅಂದರೆ, ಎರಡು ಶಿಕ್ಷೆಗಳು ಒಂದೇ ಬಾರಿಗೆ ಜಾರಿಯಾಗಲಿರುವುದರಿಂದ 10 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸಿಬಿಐ ವಕ್ತಾರರಾದ ಅಭಿಷೇಕ್ ದಯಾಳ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.