ಇಬ್ಬರು ಮಹಿಳೆಯರು ಸೇರಿ 8 ಮಂದಿ ಭಾರತೀಯರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ಕಳೆದ 25 ವರ್ಷಗಳಲ್ಲೇ ನಡೆದ ಅತ್ಯಂತ ಭೀಕರ ಅಪಘಾತವಿದು ಎನ್ನಲಾಗಿದೆ.
ಬಕಿಂಗ್ ಹ್ಯಾಮ್ ಶೇರ್`ನ ನ್ಯೂ ಪೋರ್ಟ್ ಪಗ್ನೆಲ್`ನಲ್ಲಿ ಶನಿವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ವಿಪ್ರೋ ಐಟಿ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರನ್ನ ಕರೆದೊಯ್ಯುತ್ತಿದ್ದ ಮಿನಿ ಬಸ್ ಎರಡು ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಮೂವರು ವಿಪ್ರೋ ಉದ್ಯೋಗಿಗಳು ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಡ್ರೈವರ್ ಸಹ ಭಾರತ ಮೂಲದವನೆಂದು ತಿಳಿದು ಬಂದಿದೆ. ಇಬ್ಬರು ಲಾರಿ ಡ್ರೈವರ್`ಗಳನ್ನ ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಬಂಧಿತ ಒಬ್ಬ ಡ್ರೈವರ್ ಮೇಲೆ ಅತ್ಯಂತ ವೇಗದ ಚಾಲನೆ, ವೇಗದ ಚಾಲನೆಯಿಂದ ಸಾವಿಗೆ ಕಾರಣವಾದ ಕೇಸ್ ದಾಖಲಿಸಲಾಗಿದೆ, ಮತ್ತೊಬ್ಬನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಲಾಗಿದೆ. ಸೋಮವಾರ ಿಬ್ಬರನ್ನೂ ಕೋರ್ಟ್`ಗೆ ಹಾಜರುಪಡಿಸಲಾಗುತ್ತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ