ದೆಹಲಿ: ವಿವಿಧ ಕಂಪೆನಿಗಳಲ್ಲಿ ಉದ್ಯೋಗ ನೀಡುವುದಾಗಿ ಜನರನ್ನು ನಂಬಿಸಿ ವಂಚಿಸುತ್ತಿದ್ದ ತಂಡವೊಂದನ್ನು ದೆಹಲಿಯ ಸೈಬರ್ ಪೊಲೀಸಿನವರು ಬಂಧಿಸಿದ್ದಾರೆ.
ಆರೋಪಿಗಳು ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದು ಜನರಿಗೆ ಉದ್ಯೋಗದ ಆಮಿಷವೊಡ್ಡಿ ವಂಚಿಸುತ್ತಿದ್ದರು. ಈ ತಂಡ ಕಳೆದ ನಾಲ್ಕು ತಿಂಗಳಿನಲ್ಲಿ 100ಕ್ಕೂ ಹೆಚ್ಚು ಜನರಿಗೆ ಮೋಸಗೈದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ 5 ಮಹಿಳೆಯರು ಸೇರಿದಂತೆ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲ್ ಸೆಂಟರ್ ನಡೆಸುತ್ತಿದ್ದ ಆವರಣದಲ್ಲಿ 23 ಮೊಬೈಲ್ ಫೋನ್ ಗಳು, ಎರಡು ಲ್ಯಾಪ್ ಟಾಪ್, ಆರು ಎಟಿಎಂ ಕಾರ್ಡ್ ಗಳು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.