Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದೆಹಲಿ: ಮಕ್ಕಳ ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ನವಜಾತ ಶಿಶುವಿನ ತಂದೆ ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ನಂತರ ಮಗುವಿನ ಆಪಹರಣದ ಸುಳ್ಳು ಪ್ರಕರಣವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಗುವಿನ ತಂದೆ ಇಕ್ರಾತ್ ಅಲಿಯಾಸ್ ಗುಡ್ಡಿ, ರೇಣು, ಮೋನಿ ಬೇಗಂ, ರೇಖಾ, ಯೋಗೇಶ್ ಹಾಗೂ ಮೊಹಮ್ಮದ್ ಸದ್ದಾಂ ಎಂದು ಗುರುತಿಸಲಾಗಿದೆ.
ಏಪ್ರಿಲ್ 1 ರಂದು ದೆಹಲಿಯ ಪ್ರೇಮ್ ನಗರದಿಂದ 5 ದಿನದ ಮಗುವಿನ ಅಪಹರಣದ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.ತನಗೆ ಎಚ್ಚರವಾದಾಗ ಮಗು ಇರಲಿಲ್ಲ ಎಂದು ಮಗುವಿನ ತಾಯಿ ಉಮ್ಮತ್ ಪರ್ವಿನ್ ಪೊಲೀಸರಿಗೆ ತಿಳಿಸಿದ್ದರು.ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದರು.