Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೈಪುರ: ಕಾಮಾಂಧರಿಗೆ ಮನುಷ್ಯರು ಮಾತ್ರವಲ್ಲ, ಮೂಕ ಪಶುಗಳೂ ಕಾಮದ ವಸ್ತುವಿನಂತೇ ಕಾಣುತ್ತದೆ. ಇಂತಹದ್ದೇ ಘಟನೆಯೊಂದು ರಾಜಸ್ಥಾನ್ ನಲ್ಲಿ ನಡೆದಿದೆ.
ನಾಲ್ವರು ಕಾಮಾಂಧರು ಹೆಣ್ಣು ಕರುವೊಂದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಫತೇ ಮೊಹಮ್ಮದ್ ಎಂಬ ಕಾಮಾಂಧ ಕಾಮತೃಷೆ ತೀರಿಸಿಕೊಂಡಿದ್ದಾನೆ. ಈತನ ಸಹಚರರಲ್ಲಿ ಒಬ್ಬಾತ ಕರುವನ್ನು ತಡೆ ಹಿಡಿದಿದ್ದರೆ, ಇನ್ನೊಬ್ಬ ವಿಡಿಯೋ ಮಾಡಿದ್ದ. ಇವರ ಹೇಯ ಕೃತ್ಯವನ್ನು ಮತ್ತಿಬ್ಬರು ಸಹಚರರು ನೋಡುತ್ತಾ ನಿಂತಿದ್ದರು.
ಈ ಘಟನೆ ಬಗ್ಗೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ 20 ರಿಂದ 22 ವರ್ಷ ವಯೋಮಾನದವರು ಎನ್ನಲಾಗಿದೆ.