ನವದೆಹಲಿ : 50 ವರ್ಷದ ತಂದೆಯೊಬ್ಬ ತನ್ನ ದತ್ತು ಮಗಳ ಜೊತೆ ಸಂಬಂಧ ಹೊಂದಿದ್ದ ಯುವಕನಿಂದ ಕೊಲೆಯಾದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ತನ್ನ ಅಣ್ಣನ ಮಗಳನ್ನು ದತ್ತು ಪಡೆದು ಪ್ರೀತಿಯಿಂದ ಸಾಕುತ್ತಿದ್ದರು. ಆದರೆ ಆಕೆ ಪಕ್ಕದ ಮನೆಯಾತನೊಂದಿಗೆ ಸಂಬಂಧ ಹೊಂದಿದ್ದಳು. ಇದರಿಂದ ಕೋಪಗೊಂಡ ಅವರು ಮಗಳನ್ನು ತಮ್ಮ ಹಳ್ಳಿಗೆ ಕಳುಹಿಸಿದ್ದಾರೆ. ಮತ್ತು ಆಕೆಯ ಪ್ರೇಮಿಗೆ ಮಗಳನ್ನು ಭೇಟಿ ಮಾಡಬಾರದೆಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಯುವಕ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಪ್ರೇಯಸಿಯ ತಂದೆಯನ್ನು ಕೊಲೆ ಮಾಡಿದ್ದಾನೆ.
ದೇವಸ್ಥಾನದಿಂದ ಮರಳಿದ ಮೃತನ ಪತ್ನಿ ಪತಿ ಸತ್ತು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.