Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡ್ರಗ್ಸ್ ಖರೀದಿಸಲು ತಾಯಿ ಹಣ ನೀಡಲಿಲ್ಲವೆಂದು ಮಗ ಹೀಗಾ ಮಾಡೋದು?

ಡ್ರಗ್ಸ್  ಖರೀದಿಸಲು ತಾಯಿ ಹಣ ನೀಡಲಿಲ್ಲವೆಂದು ಮಗ ಹೀಗಾ ಮಾಡೋದು?
ನವದೆಹಲಿ , ಭಾನುವಾರ, 6 ಡಿಸೆಂಬರ್ 2020 (07:17 IST)
ನವದೆಹಲಿ : ಮಾದಕ ವ್ಯಸನಿಯಾಗಿರುವ 38 ವರ್ಷದ ಮಗ 60 ವರ್ಷದ ತಾಯಿಯ ಮೇಲೆ ಹಲ್ಲೆ ಮಾಡಿದ ಘಟನೆ ಮಾಲ್ವಿಯಾ ನಗರದಲ್ಲಿ ನಡೆದಿದೆ.

ಮಾದಕ ವ್ಯಸನಿಯಾಗಿರುವ ವ್ಯಕ್ತಿ ಡಿ-ಅಡಿಕ್ಷನ್ ಕೇಂದ್ರದಿಂದ ಚಿಕಿತ್ಸೆ ಪೂರ್ಣಗೊಳಿಸದೆ ಮನೆಗೆ ಮರಳಿದ್ದಾನೆ. ಈ ಹಿನ್ನಲೆಯಲ್ಲಿ ತಾಯಿ ಅಲ್ಲಿಗೆ ಹೋಗುವಂತೆ ಒತ್ತಾಯಿಸುತ್ತಿದ್ದಳು. ಅಲ್ಲದೇ ಡ್ರಗ್ಸ್  ಖರೀದಿಸಲು ತಾಯಿ ಹಣ ನೀಡಲಿಲ್ಲ ವೆಂದು ಆಕೆಯ ಮೇಲೆ ಲೋಹದ ವಸ್ತುವಿನಿಂದ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ.

ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲತಾಯಿ ಹೊಡೆದಿದ್ದಕ್ಕೆ ಇಂತಹ ಘೋರ ಕೃತ್ಯ ಎಸಗಿದ ಹುಡುಗ