ತಿರುವನಂತಪುರಂ: ಪ್ರವಾಹ ಪೀಡಿತ ಕೇರಳದಲ್ಲಿ ಈಗ ಬಡ ಮೀನುಗಾರರೇ ಹೀರೋಗಳು! ಅದಕ್ಕೆ ಕಾರಣ ಪ್ರವಾಹ ಸಂತ್ರಸ್ತರಿಗೆ ಅವರು ನೆರವಾದ ಪರಿ.
ಕೆಲವು ಕಡೆ ವಾಯುಪಡೆ ವಿಮಾನಗಳೂ ಸಂತ್ರಸ್ತರ ನೆರವಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇಂತಹ ಸ್ಥಳಗಳಲ್ಲೆಲ್ಲಾ ನುರಿತ ಮೀನುಗಾರರು ತಮ್ಮ ದೋಣಿ ಮೂಲಕ ತೆರಳಿ ಸಂತ್ರಸ್ತರನ್ನು ರಕ್ಷಿಸಿದ್ದಾರೆ.
ತಮ್ಮ ವೃತ್ತಿಯ ಅನುಭವವೇ ಅವರ ಈ ಸಾಹಸಕ್ಕೆ ಸಹಾಯವಾಗಿದೆ. ಎಂತಹಾ ಅಪಾಯಕಾರಿ ನೀರಿನ ಸೆಲೆಯಲ್ಲೂ ಚಾಕಚಕ್ಯತೆಯಿಂದ ದೋಣಿ ಮುನ್ನಡೆಸಲು ಈ ಮೀನುಗಾರರು ನಿಪುಣರು. ತಮ್ಮ ಇದೇ ಸಾಮರ್ಥ್ಯವನ್ನು ಇವರು ಪ್ರವಾಹ ಪೀಡಿತರ ರಕ್ಷಣೆಗೆ ಬಳಸಿಕೊಂಡಿದ್ದಾರೆ. ಅಷ್ಟಕ್ಕೂ ಹೀರೋ ಎನಿಸಿಕೊಳ್ಳಲು ಸಮವಸ್ತ್ರ ಧರಿಸಲೇ ಬೇಕೆಂದೇನೂ ಇಲ್ಲವಲ್ಲ?! ಇವರ ಕಾರ್ಯಕ್ಕೊಂದು ಹ್ಯಾಟ್ಸಪ್ ಹೇಳಲೇಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.