Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ತಂದೆಯೇ ಮಗಳನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೂರು ತಿಂಗಳ ಹಿಂದೆ ತಂದೆ ಮಗಳನ್ನು ಬಲರಾಂ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದ. ಆದರೆ ಆಕೆ ಮಾನಸಿಕವಾಗಿ ಅಸ್ವಸ್ಥೆ ಎಂದು ಅತ್ತೆ ಮನೆಯವರು ಆಕೆಯನ್ನು ತವರಿಗೆ ಕಳುಹಿಸಿದ್ದರು. ಬಳಿಕ ತಂದೆ ತನ್ನ ಮತ್ತೊಬ್ಬ ಮಗಳನ್ನು ಅದೇ ಬಲರಾಂಗೆ ಕೊಟ್ಟು ಮದುವೆ ಮಾಡಿಸಿದ್ದ. ಇದು ಮೊದಲ ಮಗಳಿಗೆ ಗೊತ್ತಿರಲಿಲ್ಲ.
ಗೊತ್ತಾದ ದಿನದಿಂದ ತಂದೆ-ಮಗಳ ನಡುವೆ ಜಗಳ ನಡೆಯುತ್ತಲೇ ಇರುತ್ತಿತ್ತು. ಇದೇ ರೀತಿ ಜಗಳ ತಾರಕಕ್ಕೇರಿದಾಗ ತಂದೆ ಸಿಟ್ಟಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ. ಬಳಿಕ ತನ್ನ ಕೃತ್ಯ ಯಾರಿಗೂ ಗೊತ್ತಾಗಬಾರದೆಂದು ಆಕೆಯನ್ನು ನೇಣಿಗೇರಿಸಿ ನಾಟಕವಾಡಿದ್ದಾನೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕೃತ್ಯ ಬಯಲಾಗಿದೆ. ಬಳಿಕ ಆರೋಪಿ ತಂದೆಯನ್ನು ಅರೆಸ್ಟ್ ಮಾಡಲಾಗಿದೆ.