Webdunia - Bharat's app for daily news and videos

Install App

ಕೃಷಿಕರಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್, ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ

Krishnaveni K
ಮಂಗಳವಾರ, 3 ಸೆಪ್ಟಂಬರ್ 2024 (11:17 IST)
ನವದೆಹಲಿ: ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿಕರಿಗೆ ಬಂಪರ್ ಕೊಡುಗೆ ನೀಡಲು ಅನುಮೋದನೆ ನೀಡಲಾಗಿದೆ. ಒಟ್ಟು 7 ಯೋಜನೆಗಳಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಅವುಗಳ ಬಗ್ಗೆ ಇಲ್ಲಿದೆ ವಿವರ.

ಕೃಷಿಕರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ 7 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ಮೊದಲನೆಯದ್ದು ಡಿಜಿಟಲ್ ಕೃಷಿ ಮಿಷನ್ ಯೋಜನೆ. ಇದರಡಿಯಲ್ಲಿ 2,817 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ. ಕೃಷಿಗಾಗಿ ಸಾರ್ವಜನಿಕ ಮೂಲ ಸೌಕರ್ಯ ಒದಗಿಸುವುದು ಇದರ ಉದ್ದೇಶವಾಗಿದೆ.

ಯೋಜನೆ 2: ಬೆಳೆ ವಿಜ್ಞಾನ, ಪೌಷ್ಠಿಕಾಂಶ ಭದ್ರತೆ ಯೋಜನೆಗೆ 3979 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಬೆಳೆ ವಿಜ್ಞಾನ ಯೋಜನೆ ಇದಾಗಿದೆ.
ಯೋಜನೆ 3: ಕೃಷಿ ಶಿಕ್ಷಣ ಮತ್ತು ನಿರ್ವಹಣೆ ಬಲಪಡಿಸಲು 2,291 ಕೋಟಿ ರೂ.
ಯೋಜನೆ 4: ಪಶು ಆರೋಗ್ಯ ಮತ್ತು ಪಶು ಶಿಕ್ಷಣಕ್ಕಾಗಿ 1702 ಕೋಟಿ ರೂ. ಯೋಜನೆ
ಯೋಜನೆ 5: ತೋಟಗಾರಿಕಾ ಬೆಳೆಗಳ ಸುಸ್ಥಿರ ಅಭಿವೃದ್ಧಿಗೆ 860 ಕೋಟಿ ರೂ. ಯೋಜನೆ
ಯೋಜನೆ 6: ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆಗೆ 1202 ಕೋಟಿ ರೂ. ಮೀಸಲು
ಯೋಜನೆ 7: ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ 1115 ಕೋಟಿ ರೂ. ಮೀಸಲು.

ಈ ಏಳು ಯೋಜನೆಗಳು ರೈತರ ಆದಾಯ ಹೆಚ್ಚಿಸಲಿದೆ. ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ವಲಯವನ್ನು ಆಧುನಿಕರಣಗೊಳಿಸುವುದು ಡಿಜಿಟಿಲ್ ಕೃಷಿ ಮಿಷನ್ ಉದ್ದೇಶವಾಗಿದೆ.  ಡಿಟಜಿಲ್ ಮಾಧ್ಯಮದ ಮೂಲಕ ಬೆಳೆ ಸಮೀಕ್ಷೆ, ಆಧಾರ್ ನಂತೆ ರೈತರ ಜಮೀನಿಗೆ ವಿಶೇಷ ಐಡಿಯಾವನ್ನು ಈ ಯೋಜನೆಯಡಿಯಲಲಿ ನೀಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಎರಡು ದಿನಗಳಲ್ಲಿ ಆರು ಭಯೋತ್ಪಾದಕರ ಉಡೀಸ್‌

Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

ಮುಂದಿನ ಸುದ್ದಿ
Show comments