ನವದೆಹಲಿ: ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿಕರಿಗೆ ಬಂಪರ್ ಕೊಡುಗೆ ನೀಡಲು ಅನುಮೋದನೆ ನೀಡಲಾಗಿದೆ. ಒಟ್ಟು 7 ಯೋಜನೆಗಳಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಅವುಗಳ ಬಗ್ಗೆ ಇಲ್ಲಿದೆ ವಿವರ.
ಕೃಷಿಕರ ಕಲ್ಯಾಣಕ್ಕಾಗಿ ಮೋದಿ ಸರ್ಕಾರ 7 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ಮೊದಲನೆಯದ್ದು ಡಿಜಿಟಲ್ ಕೃಷಿ ಮಿಷನ್ ಯೋಜನೆ. ಇದರಡಿಯಲ್ಲಿ 2,817 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ. ಕೃಷಿಗಾಗಿ ಸಾರ್ವಜನಿಕ ಮೂಲ ಸೌಕರ್ಯ ಒದಗಿಸುವುದು ಇದರ ಉದ್ದೇಶವಾಗಿದೆ.
ಯೋಜನೆ 2: ಬೆಳೆ ವಿಜ್ಞಾನ, ಪೌಷ್ಠಿಕಾಂಶ ಭದ್ರತೆ ಯೋಜನೆಗೆ 3979 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಬೆಳೆ ವಿಜ್ಞಾನ ಯೋಜನೆ ಇದಾಗಿದೆ.
ಯೋಜನೆ 3: ಕೃಷಿ ಶಿಕ್ಷಣ ಮತ್ತು ನಿರ್ವಹಣೆ ಬಲಪಡಿಸಲು 2,291 ಕೋಟಿ ರೂ.
ಯೋಜನೆ 4: ಪಶು ಆರೋಗ್ಯ ಮತ್ತು ಪಶು ಶಿಕ್ಷಣಕ್ಕಾಗಿ 1702 ಕೋಟಿ ರೂ. ಯೋಜನೆ
ಯೋಜನೆ 5: ತೋಟಗಾರಿಕಾ ಬೆಳೆಗಳ ಸುಸ್ಥಿರ ಅಭಿವೃದ್ಧಿಗೆ 860 ಕೋಟಿ ರೂ. ಯೋಜನೆ
ಯೋಜನೆ 6: ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆಗೆ 1202 ಕೋಟಿ ರೂ. ಮೀಸಲು
ಯೋಜನೆ 7: ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ 1115 ಕೋಟಿ ರೂ. ಮೀಸಲು.
ಈ ಏಳು ಯೋಜನೆಗಳು ರೈತರ ಆದಾಯ ಹೆಚ್ಚಿಸಲಿದೆ. ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ವಲಯವನ್ನು ಆಧುನಿಕರಣಗೊಳಿಸುವುದು ಡಿಜಿಟಿಲ್ ಕೃಷಿ ಮಿಷನ್ ಉದ್ದೇಶವಾಗಿದೆ. ಡಿಟಜಿಲ್ ಮಾಧ್ಯಮದ ಮೂಲಕ ಬೆಳೆ ಸಮೀಕ್ಷೆ, ಆಧಾರ್ ನಂತೆ ರೈತರ ಜಮೀನಿಗೆ ವಿಶೇಷ ಐಡಿಯಾವನ್ನು ಈ ಯೋಜನೆಯಡಿಯಲಲಿ ನೀಡಲಾಗುತ್ತದೆ.