Publish Date: Fri, 04 Sep 2020 (08:00 IST)
Updated Date: Fri, 04 Sep 2020 (08:02 IST)
ನವದೆಹಲಿ : ಹಣದ ಸಹಾಯ ಕೇಳಿದ 27 ವರ್ಷದ ಯುವತಿಯ ಮೇಲೆ ಮಾಜಿ ಯೋಧನೊಬ್ಬ ಮಾನಭಂಗ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಬರ್ಜಿತ್ ಮಾನಭಂಗ ಮಾಡಿದ ಮಾಜಿ ಯೋಧ. ಈತ ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ನಲ್ಲಿ ಕೆಲಸ ಮಾಡುತ್ತಿದ್ದ. ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಚಂಡಿಘಡ ಯುವತಿಯೊಬ್ಬಳಿಗೆ ಹಣದ ಸಮಸ್ಯೆ ಎದುರಾಗಿದ್ದು, ಈತನ ಬಳಿ ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು.
ಇದನ್ನೇ ಬಂಡವಾಳವಾಗಿಸಿಕೊಂಡ ಮಾಜಿ ಯೋಧ, ಯುವತಿಯನ್ನಿ ಹೋಟೆಲ್ ವೊಂದಕ್ಕೆ ಕರೆದು ಮತ್ತು ಬರುವ ಔಷಧ ನೀಡಿ ಆಕೆಯ ಮೇಲೆ ದುಷ್ಕೃತ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅದನ್ನು ಫೋಟೊ ತೆಗೆದು ಆಕೆ ಮದುವೆಯಾಗುವ ಹುಡುಗನಿಗೆ ಕಳುಹಿಸಿ ಮದುವೆ ಕುರಿದುಬೀಳುವಂತೆ ಮಾಡಿದ್ದಾನೆ. ಈ ಬಗ್ಗೆ ಯುವತಿ ದೂರು ನೀಡಿದ್ದ ಹಿನ್ನಲೆಯಲ್ಲಿ ಆರೋಪಿ ಯೋಧನನ್ನು ಬಂಧಿಸಲಾಗಿದೆ.