Publish Date: Fri, 04 Sep 2020 (07:56 IST)
Updated Date: Fri, 04 Sep 2020 (07:57 IST)
ಭೋಪಾಲ್: ಕುಲದೇವತೆಯನ್ನು ಪ್ರಸನ್ನಗೊಳಿಸಲು ಪತ್ನಿಯನ್ನು ದೇವರಿಗೆ ಬಲಿಕೊಟ್ಟ ಘಟನೆ ಮಧ್ಯಪ್ರದೇಶದ ಸಿಂಗರೌಲಿಯ ಬಸೌಡ ಗ್ರಾಮದಲ್ಲಿ ನಡೆದಿದೆ.
ಬಿಟ್ಟಿದೇವಿ ಮೃತಪಟ್ಟ ಪತ್ನಿ, ಬ್ರಿಟೇಶ್ ಕೆವಟ್ ಕೊಲೆ ಮಾಡಿದ ಪತಿ. ದಂಪತಿ ಕುಲದೇವರ ಪೂಜೆ ಮಾಡಿದ ರಾತ್ರಿ ಮಲಗಿದ್ದಾರೆ. ಆದರೆ ತಡರಾತ್ರಿಯ ವೇಳೆ ದಂಪತಿಯ ನಡುವೆ ಜಗಳ ನಡೆದು ಆ ವೇಳೆ ಪತಿ ಪತ್ನಿಯ ರುಂಡ ಕತ್ತರಿಸಿ ಶವವನ್ನು ಹೂತರು.
ಈ ದೃಶ್ಯವನ್ನು ಕಂಡು ಮಗು ಜೋರಾಗಿ ಕಿರುಚಾಡಿದ್ದನ್ನು ಕೇಳಿ ಪಕ್ಕದ ಮನೆಯವರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.