ಹೈದರಾಬಾದ್ : ಆಂಧ್ರಪ್ರದೇಶ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇರುವಾಗಲೇ ಅಖಾಡ ಸಿದ್ಧವಾಗುತ್ತಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಹಾಲಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಕಾಂಗ್ರೆಸ್ ನಾಯಕರ ಜೊತೆಗೆ ನಡೆಸಿದ ಸಭೆ ಬಳಿಕ ಜಗನ್ ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ. ಮುಂಬರುವ ಚುನಾವಣಾ ಕದನವು ಚಂದ್ರಬಾಬು ನಾಯ್ಡು ಕ್ಷೇತ್ರ ಕುಪ್ಪಂನಿಂದಲೇ ಆರಂಭವಾಗುತ್ತದೆ. ನಾಯ್ಡು ಅವರನ್ನು ಸಂಪೂರ್ಣವಾಗಿ ಹೊರ ಹಾಕುವುದು ನಮ್ಮ ಗುರಿ. ಇದಕ್ಕಾಗಿ ಕಾರ್ಯಕರ್ತರು ಸಿದ್ಧವಾಗಬೇಕು ಎಂದು ಜಗನ್ ಕರೆ ಕೊಟ್ಟಿದ್ದಾರೆ.
1989 ರಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಚಂದ್ರಬಾಬು ನಾಯ್ಡು ಪ್ರತಿನಿಧಿಸುತ್ತಿದ್ದಾರೆ. 2019 ರ ಚುನಾವಣೆಯಲ್ಲಿ ವೈಎಸ್ಆರ್ಸಿಪಿ 151 ಸ್ಥಾನಗಳನ್ನು ಗಳಿಸಿ, ಟಿಡಿಪಿಯನ್ನು 23 ಕ್ಕೆ ಇಳಿಸಿತು. ನಾಯ್ಡು ಅವರ ಮತಗಳು ಇಲ್ಲಿ ಮೊದಲ ಬಾರಿಗೆ ಶೇ.60 ಕ್ಕಿಂತ ಕಡಿಮೆ ಅಂದರೆ ಶೇ.55.18 ಕ್ಕೆ ಕುಸಿದಿತ್ತು.
ವೈಎಸ್ಆರ್ಸಿಪಿಯ ಅಭ್ಯರ್ಥಿ ಕೆ ಚಂದ್ರಮೌಳಿ ಶೇ.38 ರಷ್ಟು ಮತಗಳನ್ನು ಪಡೆದಿದ್ದರು. ಜನಸೇನೆ ಮತ್ತು ಬಿಜೆಪಿಯಿಂದ ನಾಯ್ಡು ಮತಗಳು ಕಡಿಮೆಯಾಗಿದ್ದು ಈ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ವೈಎಸ್ಆರ್ಸಿಪಿಯಿಂದ ತಾವು ಸ್ಪರ್ಧಿಸುವ ಮೂಲಕ ನಾಯ್ಡುಗೆ ಸೋಲಿನ ರುಚಿ ಕಾಣಿಸಲು ಜಗನ್ ನಿರ್ಧರಿಸಿದ್ದಾರೆ.