Publish Date: Thu, 01 Mar 2018 (06:57 IST)
Updated Date: Thu, 01 Mar 2018 (07:03 IST)
ನವದೆಹಲಿ: ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾದ ಹಿನ್ನೆಲೆ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ದವಿಂದರ್ ಸಿಂಗ್ ಕಾಂಗ್ ಅವರನ್ನು ವಜಾ ಮಾಡಲಾಗಿದೆ. ವಿಶ್ವ ಅಥ್ಲೆಟಿಕ್ ಆಡಳಿತ ಸಮಿತಿಯು ದವಿಂದರ್ ಸಿಂಗ್ ಅವರನ್ನು ವಜಾ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಪಟಿಯಾಲದಲ್ಲಿ ದವಿಂದರ್ ಅವರ ರಕ್ತದ ಮಾದರಿಯನ್ನು ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್‌ನವರು ಸಂಗ್ರಹಿಸಿದ್ದರು.
ದವಿಂದರ್ ಸಿಂಗ್ ಅವರ ರಕ್ತದಲ್ಲಿ ಅನಬಾಲಿಕ್ ಸ್ಟಿರಾಯ್ಡ್ ಅಂಶ ಪತ್ತೆಯಾಗಿತ್ತು. ಹಾಗಾಗಿ ತಾತ್ಕಾಲಿಕವಾಗಿ ಅಮಾನತು ಆಗಿರುವ ದವಿಂದರ್ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Thu, 01 Mar 2018 (06:57 IST)
Updated Date: Thu, 01 Mar 2018 (07:03 IST)