Publish Date: Tue, 02 Jan 2018 (12:13 IST)
Updated Date: Tue, 02 Jan 2018 (12:52 IST)
ಬೆಂಗಳೂರು : ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಒಂದು ಹೊಸ ಪ್ರಿಪೇಡ್ ರಿಚಾರ್ಜ್ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರು 799 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ 3.5 ಜಿಬಿ 4ಜಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ ಸ್ಥಳೀಯ ರೋಮಿಂಗ್, ಎಸ್.ಟಿ.ಡಿ. ಕರೆ ಹಾಗು ಅನಿಯಮಿತ ಎಸ್.ಎಂ.ಎಸ್ ಸೌಲಭ್ಯವು ಲಭ್ಯವಿದೆ. ಹಾಗೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಏರ್ಟೆಲ್ 28 ದಿನಗಳಿಗೆ 98 ಜಿಬಿ 4ಜಿ ಡೇಟಾವನ್ನು ನೀಡುತ್ತಿದ್ದು, ಇದನ್ನು ದೆಹಲಿ,ಅಸ್ಸಾಂ, ಚೆನ್ನೈ, ಮುಂಬೈ, ಯುಪಿ ಮತ್ತು ಈಸ್ಟ್ ವೆಸ್ಟ್ ಹಾಗು ಉತ್ತರಾಖಂಡ್ ನಲ್ಲಿ ಈ ಆಫರ್ ಅನ್ನು ನವೆಂಬರ್ ತಿಂಗಳಿನಲ್ಲಿಯೇಯೇ ಬಿಡುಗಡೆ ಮಾಡಿತ್ತು. ಈ ಮೊದಲು 799 ರೂ ಗೆ ದಿನಕ್ಕೆ 3 ಜಿಬಿ ಡೇಟಾ ನೀಡಿದ್ದು ಈಗ ಅದನ್ನು 3.5 ಜಿಬಿಗೆ ಹೆಚ್ಚಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Tue, 02 Jan 2018 (12:13 IST)
Updated Date: Tue, 02 Jan 2018 (12:52 IST)