ಕುಡಿತದ ಚಟ ಎಂತಹ ಸ್ಥಿತಿಗೆ ತಲುಪಿಸಿದೆ ನೋಡಿ. ಇಲ್ಲೊಬ್ಬ ಆರೋಪಿ ಕೇವಲ ಕುಡಿತಕ್ಕಾಗಿ ತನ್ನ ಪತ್ನಿಯನ್ನೇ ಮಾರಾಟ ಮಾಡಿ ಇದೀಗ ಜೈಲು ಸೇರಿದ್ದಾನೆ. ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಆರೋಪಿ ತನ್ನ ಪತ್ನಿಯನ್ನು ತನ್ನ ಆಪ್ತಮಿತ್ರ, ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದ. ಈ ಸಂಬಂಧ ಪತ್ನಿ ಸಹೋದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅನಂತರ ಚವಾಣ್ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜತೆ ತಾನೂ ಸಂಬಂಧ ಬೆಳೆಸಿಕೊಂಡಿದ್ದೆ. 'ಮಾರಾಟದ ವಸ್ತು'ವಾದ ಅನಂತರ ಆತನನ್ನು ಮದುವೆಯಾದೆ ಎಂದು ಆರೋಪಿ ಪತ್ನಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯನ್ನು ಕಾಸಿಗೆ ಖರೀದಿಸಿದ ಆರೋಪಿ ಮತ್ತು ಮಾರಾಟ ಮಾಡಿದ ಆರೋಪಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.