ಮಾವನ ಮನೆಗೆ ಪತ್ನಿಯೊಂದಿಗೆ ಪತಿ ತೆರಳುತ್ತಿರುವ ಸಂದರ್ಭದಲ್ಲಿ ಪತ್ನಿಯ ಪ್ರಿಯಕರ , ಆಕೆಯ ಪತಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ. ನಂತರ ಪತ್ನಿಯೂ ಪ್ರಿಯಕರನ ಜೊತೆ ಸೇರಿ ಕುತ್ತಿಗೆ ಮತ್ತು ಎದೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ ನಂತರ ಆತ ಮೂರ್ಛೆ ಹೋದಾಗ ಸತ್ತಿದ್ದಾನೆಂದು ಭಾವಿಸಿ ಆತನ ದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಪ್ರಿಯತಮನ ನೆರವಿನಿಂದ ಪತಿಯ ಮೇಲೆ ಹತ್ಯಾಯತ್ನ ನಡೆಸಿ ಪತ್ನಿಯೊಬ್ಬಳು ಪರಾರಿಯಾದ ಘಟನೆ ವರದಿಯಾಗಿದೆ. ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಏರ್ಪೋರ್ಟ್ ರಸ್ತೆಯಲ್ಲಿ ಗಾಯಗಳಿಂದ ನರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ ನಂತರ ಈ ಘಟನೆ ಬಹಿರಂಗವಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಪತ್ನಿ ಕಿರ್ತಿ ಮತ್ತು ಆಕೆಯ ಪ್ರಿಯಕರ ಪ್ರದೀಪ್ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ನಂತರ ಆತ ಸತ್ತಿದ್ದಾನೆ ಎಂದು ಭಾವಿಸಿ ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.